ಅರ್ಚಶಿಷ್ಟ ಘೋಷಣೆ
ಯೇಸುಗುರು ಬೋಧಿಸಿದ ಕ್ರೈಸ್ತಧರ್ಮದಂತೆ ನಡೆದು, ಆಧ್ಯಾತ್ಮಿಕ ಜೀವನದಲ್ಲಿ ಹೆಚ್ಚಿನ ಸಾಧುತ್ವಗಳಿಸಿ. ದೈವಾಧೀನನಾದ ತಿರುಸಭಾಸದಸ್ಯ, ತನ್ನ ಅಂತ್ಯ ಗುರಿಯಾದ ಸ್ವರ್ಗೀಯ ಆನಂದವನ್ನು ಅನುಭವಿಸುವನೆಂಬ ದೃಢವಾಕ್ಯವನ್ನು ಪೋಪ್ ಜಗದ್ಗುರು ಬಹಿರಂಗವಾಗಿಯೂ ಅಧಿಕಾರದಿಂದಲೂ ಸಾರುವ ವಿಶಿಷ್ಟ ಕಾರ್ಯ (ಕ್ಯಾನೊನೈeóÉೀಷನ್). ಅರ್ಚಶಿಷ್ಟನೆಂಬ ಗೌರವ ದೊರಕಬೇಕಾದರೆ ಅಂಥ ವ್ಯಕ್ತಿಯಿಂದ ಕೊನೆಯಪಕ್ಷ ಎರಡಾದರೂ ಲೋಕೊತ್ತರ ಪವಾಡ ಕೃತ್ಯಗಳು ನಡೆದು ಸಾಧಾರಣವಾಗಿ ಅವು ರುಜುವಾತಾಗಬೇಕು. ಈ ಗೌರವಕ್ಕೆ ಭಾಜನನಾದ ಕಾರ್ಯದ ಅನಂತರ ಆ ವ್ಯಕ್ತಿ ತಿರುಸಭೆಯಲ್ಲಿ ಅರ್ಚಶಿಷ್ಟ ಅಥವಾ ಸಂತ ಎಂದು ಪರಿಗಣಿಸಲ್ಪಟ್ಟು ವಿಶೇಷ ಗೌರವಕ್ಕೆ ಪಾತ್ರನಾಗುತ್ತಾನೆ.
(ಡಿ.ಎಸ್.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ